SCHOOL COORDINATOR GUIDELINES-KANNADA

                                              ಶಾಲಾ ಸಂಯೋಜಕರ ಮಾರ್ಗಸೂಚಿಗಳ

                                                                ರಂಗ್ ದೇ ವೀರ್ – 2026           

 ————————————————————————————————————————————————————————————————————————————————————————————————————————————————————————————————————-

ಶಾಲಾ ಸಂಯೋಜಕರ ಪಾತ್ರ

 

ರಂಗ್ ದೇ ವೀರ್ – 2026ರಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಸುಗಮಗೊಳಿಸಲು ಹಾಗೂ ಸಮನ್ವಯಗೊಳಿಸಲು ಶಾಲೆಗಳು ಒಬ್ಬ ಶಿಕ್ಷಕರನ್ನು ಶಾಲಾ ಸಂಯೋಜಕರಾಗಿ ನೇಮಿಸಲು ಪ್ರೋತ್ಸಾಹಿಸಲಾಗುತ್ತದೆ.

ಶಾಲಾ ಸಂಯೋಜಕರು ಪ್ರಮುಖವಾಗಿ ಈ ಕೆಳಗಿನ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ:

✅ ಸ್ಪರ್ಧೆಯ ವಿಷಯ ಹಾಗೂ ಭಾಗವಹಿಸುವ ವಿಧಾನ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದು.

✅ ಅರ್ಹ ತರಗತಿಗಳಲ್ಲಿನ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಭಾಗವಹಿಸುವಂತೆ ಉತ್ತೇಜಿಸುವುದು.

✅ ಕಿರಿಯ ವಿದ್ಯಾರ್ಥಿಗಳಿಗೆ (I–VI ತರಗತಿಗಳು) ತಮ್ಮ ಚಿತ್ರಕಲೆಯನ್ನು ಡಿಜಿಟಲೀಕರಿಸಿ ಆನ್‌ಲೈನ್‌ನಲ್ಲಿ ಸಲ್ಲಿಸಲು ಸಹಾಯ ಮಾಡುವುದು.

✅ ಎಲ್ಲಾ ಅರ್ಜಿಗಳು ಸರಿಯಾದ ಮಾಹಿತಿಯೊಂದಿಗೆ, ಸಂಪೂರ್ಣವಾಗಿ ಹಾಗೂ ನಿಗದಿತ ಅವಧಿಯೊಳಗೆ ಸಲ್ಲಿಕೆಯಾಗುವಂತೆ ಖಚಿತಪಡಿಸಿಕೊಳ್ಳುವುದು.


ಶಿಫಾರಸು ಮಾಡಲಾದ ಭಾಗವಹಿಸುವಿಕೆಯ ಮಾದರಿಗಳು

ಆಯ್ಕೆ 1: ರಂಗ್ ದೇ ವೀರ್ ದಿನ (ಶಿಫಾರಸು)

ಸ್ಪರ್ಧೆಯ ಅವಧಿಯಲ್ಲಿ ಶಾಲೆಗಳು ವಿಶೇಷವಾಗಿ “ರಂಗ್ ದೇ ವೀರ್ ದಿನ”ವನ್ನು ಆಯೋಜಿಸಬಹುದು.

ಶಿಫಾರಸು ಮಾಡಲಾದ ಚಟುವಟಿಕೆಗಳು:

  •  ವಿದ್ಯಾರ್ಥಿಗಳು ಶಾಲೆಯಲ್ಲಿಯೇ ತಮ್ಮ ಚಿತ್ರಕಲೆಯನ್ನು ರಚಿಸುವುದು.
  • ‍ ಶಿಕ್ಷಕರು ಸ್ಪರ್ಧೆಯ ವಿಷಯವನ್ನು ವಿವರಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದು.
  •  ಶಾಲೆಗಳು ಬಯಸಿದರೆ ಆಂತರಿಕ ಆಯ್ಕೆ ಪ್ರಕ್ರಿಯೆಯನ್ನು ನಡೆಸಬಹುದು.
  • ಶಾಲಾ ಸಂಯೋಜಕರು ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಲು ಸಹಾಯ ಮಾಡಬಹುದು.

 

ಪ್ರಯೋಜನಗಳು

 

✅ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳ ಭಾಗವಹಿಸುವಿಕೆ

✅ ಉತ್ತಮ ಗುಣಮಟ್ಟದ ಚಿತ್ರಕಲೆ

✅ ಸುಗಮವಾದ ಸಲ್ಲಿಕೆ ಪ್ರಕ್ರಿಯೆ

✅ ದೇಶಭಕ್ತಿಯನ್ನು ಬೆಳೆಸುವ ಅರ್ಥಪೂರ್ಣ ಕಲಿಕೆಯ ಅನುಭವ


⭐ ಆಯ್ಕೆ 2: ತರಗತಿ ಆಧಾರಿತ ಭಾಗವಹಿಸುವಿಕೆ

ಶಾಲೆಗಳು ಈ ವಿಧಾನವನ್ನೂ ಆಯ್ಕೆ ಮಾಡಬಹುದು:

  • ಕಲಾ (Art) ಪಾಠದ ಅವಧಿಯಲ್ಲಿ ಚಟುವಟಿಕೆಯನ್ನು ನಡೆಸುವುದ.
  • ಸ್ವಯಂಪ್ರೇರಿತ ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು.
  • ಹಲವು ದಿನಗಳವರೆಗೆ ಚಿತ್ರಕಲೆಗಳನ್ನು ಸಂಗ್ರಹಿಸುವುದು.
  • ಅಗತ್ಯವಿದ್ದಾಗ ವಿದ್ಯಾರ್ಥಿಗಳಿಗೆ ಆನ್‌ಲೈನ್ ಸಲ್ಲಿಕೆಯಲ್ಲಿ ಸಹಾಯ ಮಾಡುವುದು.

ಚಿತ್ರಕಲೆಯ ನಿರ್ದಿಷ್ಟ ವಿವರಗಳು

ಪ್ರತಿ ಚಿತ್ರಕಲೆಯೂ ಕೆಳಗಿನ ನಿಯಮಗಳನ್ನು ಪಾಲಿಸಿರುವುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ:

  • ಕಾಗದದ ಗಾತ್ರ: A3
  • ಚಿತ್ರದ ರೆಸಲ್ಯೂಶನ್: ಕನಿಷ್ಠ 300 DPI
  • ಸ್ವೀಕರಿಸಲಾಗುವ ಫಾರ್ಮ್ಯಾಟ್‌ಗಳು: JPG ಅಥವಾ PNG

ಚಿತ್ರಕಲೆಯ ಡಿಜಿಟಲೀಕರಣ ಮಾರ್ಗಸೂಚಿಗಳು

ಚಿತ್ರವನ್ನು ಅಪ್‌ಲೋಡ್ ಮಾಡುವ ಮೊದಲು ದಯವಿಟ್ಟು ಈ ಕೆಳಗಿನ ಅಂಶಗಳನ್ನು ಖಚಿತಪಡಿಸಿಕೊಳ್ಳಿ:

  • ಸಾಕಷ್ಟು ಬೆಳಕು ಇರಬೇಕು.
  • ಸಂಪೂರ್ಣ ಚಿತ್ರ ಸ್ಪಷ್ಟವಾಗಿ ಕಾಣಬೇಕು.
  • ಯಾವುದೇ ನೆರಳು ಅಥವಾ ಪ್ರತಿಬಿಂಬ ಇರಬಾರದು.
  • ಚಿತ್ರವು ಸ್ಪಷ್ಟವಾಗಿದ್ದು, ಸರಿಯಾಗಿ ಹೊಂದಾಣಿಕೆಯಾಗಿದ್ದು ಹಾಗೂ ಉತ್ತಮ ಗುಣಮಟ್ಟದಲ್ಲಿರಬೇಕು.

ಸಲ್ಲಿಕೆ ಪ್ರಕ್ರಿಯೆ

ಎಲ್ಲಾ ಅರ್ಜಿಗಳನ್ನು ಅಧಿಕೃತ “Submit Entry” ಫಾರ್ಮ್ ಮೂಲಕವೇ ಸಲ್ಲಿಸಬೇಕು.

ಹಂತ 1

ಸ್ಪರ್ಧೆಯ ವಿಷಯವನ್ನು ಆಧರಿಸಿ ಚಿತ್ರಕಲೆಯನ್ನು ರಚಿಸಿ.

ಹಂತ 2

ಚಿತ್ರಕಲೆಯ ಸ್ಪಷ್ಟವಾದ ಫೋಟೋ ತೆಗೆದುಕೊಳ್ಳಿ ಅಥವಾ ಸ್ಕ್ಯಾನ್ ಮಾಡಿ.

ಹಂತ 3

ಈ ಕೆಳಗಿನವುಗಳನ್ನು ಸಿದ್ಧವಾಗಿಟ್ಟುಕೊಳ್ಳಿ:

  • ಚಿತ್ರಕಲೆ (JPG/PNG)
  • ವಿದ್ಯಾರ್ಥಿಯ ವಿವರಗಳು
  • ಶಾಲೆಯ ವಿವರಗಳು
  • ಶಾಲೆಯ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್

ಹಂತ 4

ಅಧಿಕೃತ “Submit Entry” ಫಾರ್ಮ್ ತೆರೆಯಿರಿ.

ಹಂತ 5

ನಿಮ್ಮ Google (Gmail) ಖಾತೆಯನ್ನು ಬಳಸಿ Sign in ಮಾಡಿ.

ಹಂತ 6

⬆ ಚಿತ್ರಕಲೆಯನ್ನು ಅಪ್‌ಲೋಡ್ ಮಾಡಿ, ಫಾರ್ಮ್ ಅನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಹಾಗೂ ಸಲ್ಲಿಸಿ


ಸಲ್ಲಿಕೆ ಮಾರ್ಗಸೂಚಿಗಳು

ವೈಯಕ್ತಿಕ ಸಲ್ಲಿಕೆ (ಶಿಫಾರಸು ಮಾಡಲಾಗಿದೆ)

ಪ್ರತಿ ವಿದ್ಯಾರ್ಥಿಯ ಚಿತ್ರಕಲೆಯನ್ನು ಅಧಿಕೃತ “Submit Entry” ಫಾರ್ಮ್ ಮೂಲಕ ಪ್ರತ್ಯೇಕವಾಗಿ ಸಲ್ಲಿಸಬೇಕು.

ಇದರಿಂದ ಈ ಕೆಳಗಿನವುಗಳನ್ನು ಖಚಿತಪಡಿಸಿಕೊಳ್ಳಬಹುದು:

✔ ಭಾಗವಹಿಸುವವರ ನಿಖರ ದಾಖಲೆಗಳು

✔ ನ್ಯಾಯಸಮ್ಮತ ಮೌಲ್ಯಮಾಪನ

✔ ಸುಲಭವಾದ ಟ್ರ್ಯಾಕಿಂಗ್ ಮತ್ತು ಪರಿಶೀಲನೆ


ಸಹಾಯಿತ ಸಲ್ಲಿಕೆ

ಕಿರಿಯ ವಿದ್ಯಾರ್ಥಿಗಳಿಗಾಗಿ ಶಾಲಾ ಸಂಯೋಜಕರು ಈ ಕೆಳಗಿನ ರೀತಿಯಲ್ಲಿ ಸಹಾಯ ಮಾಡಬಹುದು:

  • ಚಿತ್ರಕಲೆಯ ಫೋಟೋ ತೆಗೆದುಕೊಳ್ಳುವುದು ಅಥವಾ ಸ್ಕ್ಯಾನ್ ಮಾಡುವುದು.
  • ವಿದ್ಯಾರ್ಥಿಯ ಪರವಾಗಿ ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡುವುದು.
  • ಚಿತ್ರಕಲೆಯನ್ನು ಅಪ್‌ಲೋಡ್ ಮಾಡಿ ಸಲ್ಲಿಸುವುದು.

ದಯವಿಟ್ಟು ಗಮನಿಸಿ: ಪ್ರತಿಯೊಂದು ಚಿತ್ರಕಲೆಯನ್ನೂ ಪ್ರತ್ಯೇಕವಾಗಿ ಸಲ್ಲಿಸಲೇಬೇಕು.


ಪ್ರಮುಖ ಸೂಚನೆ

ಇಮೇಲ್ ಮೂಲಕ ಸಲ್ಲಿಕೆಗಳು ಹಾಗೂ ಒಟ್ಟಾರೆ (Bulk) ಅಪ್‌ಲೋಡ್‌ಗಳನ್ನು ಶಿಫಾರಸು ಮಾಡುವುದಿಲ್ಲ.

ದೇಶಾದ್ಯಂತ ಹೆಚ್ಚಿನ ಸಂಖ್ಯೆಯ ಭಾಗವಹಿಸುವಿಕೆಯನ್ನು ನಿರೀಕ್ಷಿಸಲಾಗಿರುವುದರಿಂದ, ಅಧಿಕೃತ “Submit Entry” ಫಾರ್ಮ್ ಮೂಲಕ ವೈಯಕ್ತಿಕವಾಗಿ ಸಲ್ಲಿಸುವುದು ಈ ಕೆಳಗಿನ ಅಂಶಗಳನ್ನು ಖಚಿತಪಡಿಸುತ್ತದೆ:

✔ ನ್ಯಾಯಸಮ್ಮತತೆ

✔ ಪಾರದರ್ಶಕತೆ

✔ ಪರಿಣಾಮಕಾರಿ ಮೌಲ್ಯಮಾಪನ

✔ ನಿಖರ ದಾಖಲೆ ನಿರ್ವಹಣೆ


 

ಶಾಲಾ ಮಾನ್ಯತೆ

ಅತ್ಯುತ್ತಮ ವಿದ್ಯಾರ್ಥಿ ಭಾಗವಹಿಸುವಿಕೆಯನ್ನು ತೋರಿದ ಶಾಲೆಗಳು ವಿಶೇಷ ಮಾನ್ಯತೆಗೆ ಸಹ ಪರಿಗಣಿಸಲ್ಪಡುತ್ತವೆ.

ರಾಷ್ಟ್ರೀಯ ಶಾಲಾ ಭಾಗವಹಿಸುವಿಕೆ ಪ್ರಶಸ್ತಿಗಳು

ಕೆಳಗಿನ ವಿಭಾಗಗಳಿಗೆ ಪ್ರತ್ಯೇಕವಾಗಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ:

ಕಿರಿಯ ವಿಭಾಗದ ಶಾಲೆಗಳು (ಪ್ರಾಥಮಿಕ ಹಂತ)

ಹಿರಿಯ ವಿಭಾಗದ ಶಾಲೆಗಳು (ಪ್ರೌಢ ಹಾಗೂ ಪದವಿ ಪೂರ್ವ ಹಂತ)

ಪ್ರತಿ ವಿಭಾಗದಲ್ಲಿ ಕೆಳಗಿನ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ:

ಅತ್ಯಧಿಕ ವಿದ್ಯಾರ್ಥಿ ಭಾಗವಹಿಸುವಿಕೆ ಹೊಂದಿದ ಅತ್ಯುತ್ತಮ ಶಾಲೆ

ಅತ್ಯಧಿಕ ವಿದ್ಯಾರ್ಥಿ ಭಾಗವಹಿಸುವಿಕೆ ಹೊಂದಿದ ರನ್ನರ್-ಅಪ್ ಶಾಲೆ

(ಒಟ್ಟು ನಾಲ್ಕು ರಾಷ್ಟ್ರೀಯ ಮಟ್ಟದ ಶಾಲಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.)

ರಾಷ್ಟ್ರೀಯ ಮಾನ್ಯತೆ

ಮೇಲಿನ ಪ್ರಶಸ್ತಿಗಳ ಜೊತೆಗೆ, ಪ್ರತಿ ವಿಭಾಗದ ಅಗ್ರ 5 ಭಾಗವಹಿಸಿದ ಶಾಲೆಗಳಿಗೆ ವಿಶೇಷ ರಾಷ್ಟ್ರೀಯ ಮಾನ್ಯತೆ ನೀಡಲಾಗುತ್ತದೆ. ಇದರಲ್ಲಿ:

  • ರಂಗ್ ದೇ ವೀರ್ ಗೌರವ ಸ್ಕ್ರೋಲ್ (Scroll of Honour)
  • Honourpoint Foundation ವೆಬ್‌ಸೈಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಪರಿಚಯ
  • ಪ್ರಶಂಸಾ ಪ್ರಮಾಣಪತ್ರ

✔ ಅಂತಿಮ ಪರಿಶೀಲನಾ ಪಟ್ಟಿ

ಸಲ್ಲಿಸುವ ಮೊದಲು ದಯವಿಟ್ಟು ಈ ಕೆಳಗಿನವುಗಳನ್ನು ಖಚಿತಪಡಿಸಿಕೊಳ್ಳಿ:

☑ ಚಿತ್ರಕಲೆ ಪೂರ್ಣಗೊಂಡಿದ್ದು ಸ್ಪಷ್ಟವಾಗಿ ಕಾಣುತ್ತಿದೆ.

☑ ವಿದ್ಯಾರ್ಥಿಯ ಎಲ್ಲಾ ವಿವರಗಳು ಸರಿಯಾಗಿವೆ.

☑ ಸೂಕ್ತ ಗುರುತಿನ ದಾಖಲೆಯನ್ನು ಅಪ್‌ಲೋಡ್ ಮಾಡಲಾಗಿದೆ.

☑ ಸರಿಯಾದ ವಿಭಾಗ (Category) ಆಯ್ಕೆ ಮಾಡಲಾಗಿದೆ.

☑ ಪ್ರತಿಯೊಂದು ಚಿತ್ರಕಲೆಯನ್ನು ಪ್ರತ್ಯೇಕವಾಗಿ ಸಲ್ಲಿಸಲಾಗಿದೆ.


ಅಧಿಕೃತ ಸಲ್ಲಿಕೆ

ಎಲ್ಲಾ ಅರ್ಜಿಗಳನ್ನು ಅಧಿಕೃತ “Submit Entry” ಫಾರ್ಮ್ ಮೂಲಕವೇ ಸಲ್ಲಿಸಬೇಕು.


ಸಹಾಯ ಬೇಕೇ?

ಭಾಗವಹಿಸುವಿಕೆ, ಸಲ್ಲಿಕೆ ಅಥವಾ ಶಾಲಾ ಸಮನ್ವಯಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿದ್ದರೆ, ದಯವಿಟ್ಟು ಸಂಪರ್ಕಿಸಿ: rdv@honourpoint.in

ಭಾರತದ ಸಶಸ್ತ್ರ ಪಡೆಗಳ ಧೈರ್ಯ, ತ್ಯಾಗ ಮತ್ತು ದೇಶಭಕ್ತಿಗೆ ಅರ್ಥಪೂರ್ಣ ಗೌರವ ಸಲ್ಲಿಸುವ ರಂಗ್ ದೇ ವೀರ್ – 2026 ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ನಿಮ್ಮ ಅಮೂಲ್ಯ ಸಹಕಾರವನ್ನು ನಾವು ಆತ್ಮೀಯವಾಗಿ ನಿರೀಕ್ಷಿಸುತ್ತೇವೆ.